ನೃಸಿಂಹ -
ಮಹಾನುಭಾವ ಪಂಥದ ಒಬ್ಬ ಮರಾಠೀ ಕವಿ. 14ನೆಯ ಶತಮಾನದವ. ಚಾಲ್ಹಣ ಪಂಡಿತ ಅಥವಾ ಚಾಲ್ಹೇರಾಜ ಎಂಬಾತ ಈತನ ಗುರು. ನಾಗದೇವಾಚಾರ್ಯ-ಬಾಸ್ಕರಾಚಾರ್ಯ-ನಾಗಾಂಬಾ-ಮುನಿಕಮಲಾಕರ-ಸೀತಾಂಬಾ-ಚಾಲ್ಹಣ- ಇದು ಇವನ ಗುರುಪರಂಪರೆ. ತನ್ನ ಗುರುವಿನ ಹೆಸರನ್ನೇ ಅಂಕಿತವಾಗಿಸಿ ಚಾಲ್ಹಣ ಸಂಕೇತ ಅಥವಾ ಸಂಕೇತ ಗೀತಾ ಎಂಬ ಒಂದು ಗೀತೆಯ ಟೀಕೆಯನ್ನು ಈತ ಬರೆದಿದ್ದಾನೆ. ಇದರಲ್ಲಿನ ಓವಿಗಳ ಒಟ್ಟು ಸಂಖ್ಯೆ 1,389. ಇವನ ರುಕ್ಷಿಣೀಸ್ವಯಂವರ (ಕ್ರಿ.ಶ. 1403) ಎಂಬ ಇನ್ನೊಂದು ಕಾವ್ಯದ ಓವಿಗಳ ಒಟ್ಟು ಸಂಖ್ಯೆ: 2,317. ಗೀತೆಯ ಟೀಕೆ ಎಂಬುದು ಮಹಾನುಭಾವ ಪಂಥದ ತತ್ತ್ವಗಳನ್ನು ಪ್ರತಿಪಾದಿಸುತ್ತದೆ.										(ಎಸ್.ಎಸ್.ಜೆ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ